ಬೆಳ್ಳಿ ತೆರೆ ಮೇಲೆ ಲಯನ್ ಇಸ್ ಬ್ಯಾಕ್
Posted date: 11 Thu, Feb 2016 – 11:12:03 AM

 ಚಿತ್ರನಟ ವಿಷ್ಣುರ್ವನ್ ಅವರ ಜೀವನದ ಕಥಾ ಹಂದರವೊಂದನ್ನು ಹೊಂದಿರುವ ಚಿತ್ರವೊಂದು ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ. ಮೈಸೂರು ವಿಷ್ಣುರ್ಧನ್ ಅವರ ಹುಟ್ಟೂರು ಎಂಬುದು ವಿಶೇಷ, ಹಾಗಾಗಿ ಮೈಸೂರಿನಲ್ಲಿಯೇ ಅವರ ಜೀವನ ಚರಿತ್ರೆಯನ್ನು ಹೊಂದಿರುವ ಚಿತ್ರವೊಂದನ್ನು ನಿರ್ಮಿಸುತ್ತಿzರೆ ವಿಷ್ಣವರ್ಧನ್ ಅವರ ಪಕ್ಕಾ ಅಭಿಮಾನಿಯೂ ಆದ ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಎಂ.ಡಿ.ಪಾರ್ಥಸಾರಥಿ. ಇವರ ಜೊತೆ  ನಿರ್ಮಾಣದಲ್ಲಿ  ಸಾಥ್ ನೀಡುತ್ತಿzರೆ ಗೌತಮ್ ಸೇಠ್. ಈ ಚಿತ್ರದ ಮಹೂರ್ತ ಸಮಾರಂಭ  ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀಗಣಪತಿ ಸಚ್ಚಿದಾನಂದಾಶ್ರಮದಲ್ಲಿ  ನಡೆಯಿತು. ದತ್ತಾತ್ತೇಯ  ಗುಡಿಯ  ಮುಂದೆ ಮೊದಲ ದಶ್ಯಕ್ಕೆ  ಗಣಪತಿ ಸಚ್ಚಿದಾನಂದ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ತಮ್ಮ ಆಶ್ರಮಕ್ಕೆ ನಟ ವಿಷ್ಣವರ್ಧನ್ ಭೇಟಿ ನೀಡುತ್ತಿದ್ದದ್ದು, ಅವರ ದೈವ ಭಕ್ತಿ, ಶೃದ್ಧೆ ಎಲ್ಲವನ್ನೂ ಈ ಸಂದಭದಲ್ಲಿ  ಗಣಪತಿ ಸಚ್ಚಿದಾನಂದಸ್ವಾಮಿ ಅವರು ನೆನಪಿಸಿಕೊಂಡರು.
     ನಿರ್ಮಾಪಕ  ಎಂ.ಡಿ. ಪಾರ್ಥಸಾರಥಿ  ಮಾತನಾಡುತ್ತ ತಮ್ಮ ಸಹೋದರ ಕ್ಯಾಮೆರಾ ಸಹಾಯಕರಾಗಿದ್ದು, ತಮ್ಮ ತಾತ, ತಂದೆ ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನ್ನು ಸ್ಮರಿಸಿಕೊಂಡರು. ಅಲ್ಲದೆ, ವಿಷ್ಣು  ಅವರ ಅಭಿಮಾನಿಯಾದ ತಾವು ವಿಷ್ಣುವರ್ಧನ್ ಅವರ  ಉತ್ತಮ ಕೆಲಸ, ಸೇವಾ  ಕಾರ್ಯಗಳನ್ನು  ತೆರೆಯ ಮೇಲೆ ಜನರಿಗೆ ತೋರಿಸುವ ದೃಷ್ಟಿಯಿಂದ  ಮೊದಲಬಾರಿಗೆ  ತಮ್ಮ ಪಾಥಿ ಫಿಲಂ ಸಂಸ್ಥೆಯಿಂದ  ಈ ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿದರು. ಈ ಚಿತ್ರದ ನಿರ್ಮಾಣಕ್ಕೆ ಭಾರತೀ ವಿಷ್ಣುವರ್ಧನ್ ಅವರ ಅನುಮತಿ ಹಾಗೂ ಆಶೀರ್ವಾದವನ್ನು ಸಹ ಪಡೆದಿರುವುದಾಗಿ ಹೇಳಿದರು.
    ಈ ಚಿತ್ರದಲ್ಲಿ  ಒಟ್ಟು  ಐದು ಹಾಡುಗಳಿದ್ದು,  ಒಂದು ಟಪ್ಪಾಂಗುಚ್ಚಿ, ಮೆಲೋಡಿ, ಆm ಸಾಂಗ್ , ಡ್ಯೂಯೆಟ್ ಮತ್ತು  ಡ್ರೀಮ್ ಸಾಂಗ್ ಇದ್ದು, ಎ.ಆರ್.ರೆಹಮಾನ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಹರಿಬಾಬು ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿzರೆ. ಹೊಸಬರಾದ ಮಂಜುನಾಥ್ ಎಂಬುವರು  ಚಿತ್ರಕ್ಕೆ ಸಾಹಿತ್ಯ ಬರೆದಿzರೆ, ರವಿಶಂಕರ್ ಈ  ಚಿತ್ರಕ್ಕೆ ಸಂಭಾಷಣೆಗಳನ್ನು  ಬರೆದಿzರೆ.
       ಕಳೆದ ೩೦ ವರ್ಷಗಳಿಂದ ಚಿತ್ರರಂಗದಲ್ಲಿ  ಸಹ, ಸಹಾಯಕ ನಿರ್ದೇಶಕರಾಗಿ, ಸಾಹಸ  ನಿದೇರ್ಶಕರಾಗಿ ಕೆಲಸ  ಮಾಡಿದ  ಅನುಭವವಿರುವ  ವಿಕ್ರಂ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿzರೆ. ಬಿಡುಗಡೆಗೆ ಸಿದ್ದವಾಗಿರುವ  ಬ್ರಹ್ಮ ವಿಷ್ಣು ಮಹೇಶ್ವರ, ರಾಜಧಾನಿ-೨  ಚಿತ್ರಗಳಲ್ಲಿ ನಟಿಸಿರುವ ಪ್ರೀತಮ್ ಈ ಚಿತ್ರದ ನಾಯಕನಾದರೆ, ಮೈಸೂರಿನ ಮಹಾಜನ ಕಾಲೇಜ್‌ನಲ್ಲಿ  ಓದುತ್ತಿರುವ ಅಮೃತಾ ನಾಯಕಿ ಪಾತ್ರ  ನಿರ್ವಹಿಸುತ್ತಿದ್ದಾರೆ.   ಉಳಿದ  ತಾರಾಗಣದಲ್ಲಿ  ರವಿಶಂಕರ್, ಶೋಭರಾಜ್, ರಾಜು ತಾಳಿಕೋm ಅಭಿನಯಿಸುತ್ತಿzರೆ. ಅಲ್ಲದೆ ಮಜಾ mಕೀಸ್ ಖ್ಯಾತಿಯ  ಪವನ್ ಈ ಚಿತ್ರದಲ್ಲಿ ಹಾಸ್ಯ ನಟರಾಗಿ ಅಭಿನಯಿಸುತ್ತಿzರೆ.
  ಮುಹೂರ್ತದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ನಾಯಕ ಪ್ರೀತಮ್, ಕನ್ನಡ ಚಿತ್ರರಂಗದ ಲೆಜೆಂಡ್ ವಿಷ್ಣುವರ್ಧನ್  ಅವರ  ದತ್ತು ಪತ್ರನ  ಪಾತ್ರವನ್ನು ನಾನು ಈ ಚಿತ್ರದಲ್ಲಿ ನಿರ್ವಹಿಸುತ್ತಿದ್ದು,  ಪಾತ್ರ ತುಂಬಾ ಟಫ್ ಆಗಿದ್ದು, ಅದಕ್ಕೆ ತಕ್ಕಂತೆ ಸಮರ್ಥವಾಗಿ ನಟಿಸುವುದಾಗಿ ಹೇಳಿದರು.
ನಾನು  ನಿಜ ಜೀವನದಲ್ಲಿ ಪತ್ರಕರ್ತೆಯಾಗಬೇಕೆಂದು ಕೊಂಡಿz, ಆದರೆ ಅದು ನನಸಾಗುವ ಮೊದಲೇ ಈ ಚಿತ್ರದಲ್ಲಿ ನನಗೆ ಪತ್ರಕರ್ತೆಯಾಗಿ ನಟಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದರು ನಟಿ ಅಮೃತಾ. ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿಯೇ ನಡೆಯಲಿದೆ. ನಾನು ಹೆಚ್ಚಾಗಿ ಮಾತನಾಡದೆ,  ಕೆಲಸ ಮಾಡಿ ತೋರಿಸುತ್ತೇನೆ ಎಂದು ನಿರ್ದೇಶಕ ವಿಕ್ರಂ ಹೇಳಿದರು. ಚಿತ್ರಕ್ಕೆ  ಸುಮಾರು  ೨ ಕೋಟಿ ರೂ.ಗಳ  ಬಜೆಟ್ ಪ್ಲಾನ್ ಹಾಕಿಕೊಂಡಿzವೆ, ಕಡಿಮೆ ವೆಚ್ಚದಲ್ಲಿ ಉತ್ತಮ ಚಿತ್ರ ಮಾಡಿ ತೋರಿಸುತ್ತೇವೆ ಎಂದು  ನಿರ್ಮಾಪಕ ಪಾರ್ಥಸಾರಥಿ ವಿಶ್ವಾಸ ವ್ಯಕ್ತಪಡಿಸಿದರು.
  ನಟ ಸಾಹಸಸಿಂಹ ವಿಷ್ಣುವಧನ್ ಅವರ ದತ್ತು ಪುತ್ರ ಅಮೇರಿಕಾದಲ್ಲಿ ಓದುತ್ತಿರುತ್ತಾರೆ,  ಆಕಸ್ಮಿಕವಾಗಿ  ವಿಷ್ಣು  ನಿಧನರಾದ  ವಿಷಯ ತಿಳಿದರೂ  ತಕ್ಷಣವೇ ಭಾರತಕ್ಕೆ ಬರಲಿಕ್ಕಾಗದ  ನಾಯಕ, ನಂತರ  ತನ್ನೂರಿಗೆ ಬರುತ್ತಾನೆ, ವಿಷ್ಣುವರ್ಧನ್ ಅವರಿಗೆ ಏನಾಗಿತ್ತು , ಅವರು ಅಕಸ್ಮಾತ್ ನಿಧನರಾಗಲು ಕಾರಣವೇನು  ಎಂದು ಅವರ ಸಾವಿನ ರಹಸ್ಯವನ್ನು ಬೆನ್ನು ಹತ್ತುತ್ತಾನೆ, ಆನಂತರ ಮುಂದೇನಾಯಿತು  ಎಂಬುದನ್ನು ತಿಳಿಯಬೇಕಾದರೆ   ಚಿತ್ರ ಬಿಡುಗಡೆಯಾಗುವವರೆಗೆ  ಕಾಯಲೇಬೇಕು. ಅಂದ ಹಾಗೆ ಈ ಚಿತ್ರದ ಮೂಲಕ ಹಲವಾರು  ಕಲಾವಿದರು  ಬಡ್ತಿ ಪಡೆಯುತ್ತಿzರೆ, ಅಲ್ಲದೆ  ಹೊಸದಾಗಿ ಚಿತ್ರರಂಗ ಪ್ರವೇಶಿಸುತ್ತಿzರೆ. ಹಾಗಾಗಿ ಇದು ಸಂಪೂರ್ಣವಾಗಿ ಹೊಸಬರ ಚಿತ್ರ ಎನ್ನಲು ಅಡ್ಡಿಯೇನಿಲ್ಲ.




Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed